Caution! Unverified Website!
The identity of this user has not yet been verified. Please make transactions at your own risk!
By Shyam Sundar G |
Wed, 12-Dec-2018, 10:44
*೨೪ ಗುರುಗಳು*
*1-9*
೧. ಪೃಥ್ವಿ - ಪೃಥ್ವಿಯಂತೆ ಸಹನಶೀಲ ಹಾಗೂ ತಾಳ್ಮೆಯುಳ್ಳವನಾಗಿರಬೇಕು.
೨. ವಾಯು - ಯಾವ ರೀತಿಯಲ್ಲಿ ವಾಯುವು ಶೀತ ಉಷ್ಣತೆಗಳಲ್ಲಿ ಸಂಚರಿಸುತ್ತಿರುವಾಗಲೂ ಅವುಗಳ ಗುಣದೋಷಗಳಲ್ಲಿ ಸಿಲುಕಿಕೊಳ್ಳುವುದಿಲ್ಲವೋ, ಹಾಗೆಯೇ ನಾವು ಯಾರ ಗುಣ ದೋಷಗಳನ್ನೂ ನೋಡದೇ ಸುತ್ತಮುತ್ತಲಿನ ವಿಷಯಗಳಿಂದ ವಿಚಲಿತರಾಗದೇ ಮಾರ್ಗಕ್ರಮಣವನ್ನು ಮಾಡಬೇಕು, ವಾಯುವಿನಂತೆ ವಿರಕ್ತರಾಗಿರಬೇಕು.
೩. ಆಕಾಶ - ಆಕಾಶವು ನಿರ್ವಿಕಾರ, ಅಚಲ ಮತ್ತು ಒಂದಾಗಿದೆ.
೪. ನೀರು - ಮನುಷ್ಯನು ನೀರಿನಂತೆ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸಬೇಕು ಮತ್ತು ಯಾರ ಪಕ್ಷಪಾತವನ್ನೂ ಮಾಡಬಾರದು. ಯಾವ ರೀತಿ ನೀರು ತನ್ನ ಕೊಳೆಯನ್ನು ತಳದಲ್ಲಿಟ್ಟು ಬೇರೆಯವರ ಕೊಳೆಯನ್ನು ಸ್ವಚ್ಛ ಮಾಡುತ್ತದೆಯೋ, ಹಾಗೆಯೇ ಮನುಷ್ಯನು ತನ್ನ ಕೊಳೆಯನ್ನು ತ್ಯಜಿಸಿ ಜ್ಞಾನ ಪ್ರಾಪ್ತಮಾಡಿಕೊಳ್ಳಬೇಕು ಮತ್ತು ಅಜ್ಞಾನಿ ಜನರ ಪಾಪಗಳನ್ನು ಸ್ವಚ್ಛ ಮಾಡಬೇಕು. ಯಾವ ರೀತಿ ಒಂದೇ ಜಾಗದಲ್ಲಿ ನಿಂತ ನೀರು ದುರ್ಗಂಧ ಯುಕ್ತವಾಗುತ್ತದೆಯೋ ಮತ್ತು ಹರಿಯುತ್ತಿದ್ದರೆ ಶುದ್ಧವಾಗುತ್ತದೆಯೋ, ಅದೇ ರೀತಿ ಮನುಷ್ಯರದ್ದೂ ಆಗಿದೆ. ಆದುದರಿಂದ ನಾವು ನಿಂತ ನೀರಾಗದೆ ಹೊಸ ಹೊಸ ವಿಷಯಗಳನ್ನು ಸದಾ ಕಲಿಯಬೇಕು.
೫. ಅಗ್ನಿ- ಮನುಷ್ಯನು ಅಗ್ನಿಯಂತೆ ತಪಸ್ಸು ಮಾಡಿ ಪ್ರಕಾಶಿತನಾಗಬೇಕು ಮತ್ತು ಅಗ್ನಿಯಂತೆ ಯಾವುದು ಸಿಗುತ್ತದೆಯೋ ಅದನ್ನು ಭಕ್ಷಿಸಿ, ದೋಷಾಚರಣೆ ಮಾಡದೇ ತನ್ನ ಒಳ್ಳೆಯ ಗುಣಗಳನ್ನು ಒಳ್ಳೆಯ ಪ್ರಸಂಗದಲ್ಲಿ ಮತ್ತು ಯೋಗ್ಯ ಸ್ಥಳದಲ್ಲಿ ಉಪಯೋಗಿಸಬೇಕು. ಅಗ್ನಿಯಂತೆ ಯಾವಾಗಲೂ ಪವಿತ್ರವಾಗಿರಬೇಕು ಮತ್ತು ಎಲ್ಲರೊಂದಿಗೂ ಸಮನಾಗಿ ವರ್ತಿಸಬೇಕು. ಯಾವ ಯಾವ ದೇವತೆಗಳಿಗೆ ಅಗ್ನಿಯಲ್ಲಿ ಆಹುತಿಯನ್ನು ಕೊಡಲಾಗುತ್ತದೆಯೋ, ಆಯಾಯ ದೇವತೆಗಳಿಗೆ ಅಗ್ನಿಯು ಅದನ್ನು ತಲುಪಿಸುತ್ತದೆ. ಅಂದರೆ ಅಗ್ನಿಯು ತನ್ನಲ್ಲಿ ಏನನ್ನೂ ಇಟ್ಟುಕೊಳ್ಳದೆ ಯಾರಿಗೆ ಏನನ್ನು ತಲುಪಿಸಬೇಕಾಗಿರುತ್ತದೆಯೋ ಅವರಿಗೆ ಅದನ್ನು ತಲುಪಿಸುತ್ತದೆ.
೬. ಚಂದ್ರ - ಯಾವ ರೀತಿ ಚಂದ್ರನಲ್ಲಿ ಕಲೆಗಳಿದ್ದರೂ ಸಹ ಚಂದ್ರ ದುಃಖಿಯಾಗುವುದಿಲ್ಲವೋ ಅದೇ ರೀತಿ ನಮ್ಮ ಶರೀರದ ವಿಕಾರಗಳಿಂದ ನಾವು ದುಃಖಿಯಾಗಬಾರದು.
೭. ಸೂರ್ಯ - ಸೂರ್ಯನು ಭವಿಷ್ಯತ್ಕಾಲದ ಬಗ್ಗೆ ವಿಚಾರ ಮಾಡಿ ನೀರನ್ನು ಸಂಗ್ರಹಿಸಿಡುತ್ತಾನೆ ಮತ್ತು ಯೋಗ್ಯ ಸಮಯ ಬಂದಾಗ ಅದನ್ನು ಪರೋಪಕಾರಕ್ಕಾಗಿ ಭೂಮಿಯ ಮೇಲೆ ಸುರಿಸುತ್ತಾನೆ. ಹಾಗೆಯೇ ಮನುಷ್ಯನು ಉಪಯುಕ್ತವಾದ ವಸ್ತುಗಳನ್ನು ಸಂಗ್ರಹಿಸಿ ದೇಶ, ಕಾಲ ಮತ್ತು ವರ್ತಮಾನ ಸ್ಥಿತಿಗಳ ವಿಚಾರಮಾಡಿ ಪಕ್ಷಪಾತ ಮಾಡದೇ ಎಲ್ಲ ಪ್ರಾಣಿಗಳಿಗೂ ಅವುಗಳ ಲಾಭವಾಗುವಂತೆ ಮಾಡಬೇಕು.
೮. ಪಾರಿವಾಳ- ಪಾರಿವಾಳವು ತನ್ನ ಸಂಸಾರದೊಂದಿಗೆ ಆನಂದದಿಂದ ಇರುತ್ತದೆ. ಆದರೆ ಹದ್ದು ಬಂದು ಪಾರಿವಾಳವನ್ನು ಪರಿವಾರ ಸಮೇತವಾಗಿ ತಿಂದು ನಾಶ ಮಾಡುತ್ತದೆ. ಅದೇ ರೀತಿ ಜೀವನದಲ್ಲಿ ಏನು ಬೇಕಾದರೂ ಆಗಬಹುದು. ಆದ್ದರಿಂದ ನಮ್ಮ ಮನಸ್ಸನ್ನು ಇದರಲ್ಲಿ ಸಕ್ಕಿಹಾಕಿಸದೆ ನಮ್ಮ ಕರ್ತವ್ಯಗಳನ್ನು ಮಾಡಬೇಕು.
೯. ಹೆಬ್ಬಾವು - ಹೆಬ್ಬಾವು ಭಯಪಡದೆ ಪ್ರಾರಬ್ಧದ ಮೇಲೆ ನಂಬಿಕೆಯನ್ನಿಟ್ಟು ಒಂದೇ ಜಾಗದಲ್ಲಿ ಬಿದ್ದುಕೊಂಡಿರುತ್ತದೆ. ಅದು ಯಾವ ಯಾವ ಸಮಯದಲ್ಲಿ ಏನೇನು ಸಿಗುತ್ತದೆಯೋ, ಅದನ್ನು ಭಕ್ಷಿಸಿ ಸಂತೋಷ ಪಡುತ್ತದೆ. ಅದಕ್ಕೆ ಪ್ರಾಪ್ತವಾದ ಆಹಾರವನ್ನು ಹೆಚ್ಚು-ಕಡಿಮೆ ಅಥವಾ ಸಿಹಿ-ಕಹಿ ಎಂದು ವಿಚಾರ ಮಾಡುವುದಿಲ್ಲ. ಕೆಲವೊಂದು ಸಮಯದಲ್ಲಿ ಹೆಬ್ಬಾವು ತಿನ್ನುವುದಕ್ಕೆ ಏನೂ ಸಿಗದಿದ್ದರೂ ಹೆದರುವುದಿಲ್ಲ. ಹಾಗೆಯೇ ಕೆಲವೊಂದು ಸಲ ನಮಗೆ ಏನೂ ಸಿಗದಿದ್ದರೂ ದೇವರ ಮೇಲಿನ ಶ್ರದ್ಧೆಯನ್ನು ಕಡಿಮೆ ಮಾಡಬಾರದು.
This site was designed with Websites.co.in - Website Builder
This website was created by a user of Websites.co.in, a free instant website builder. Websites.co.in does NOT endorse, verify, or guarantee the accuracy, safety, or legality of this site's content, products, or services. Always exercise caution—do not share sensitive data or make payments without independent verification. Report suspicious activity by clicking the report abuse below.
We appreciate you contacting us. Our support will get back in touch with you soon!
Have a great day!
Please note that your query will be processed only if we find it relevant. Rest all requests will be ignored. If you need help with the website, please login to your dashboard and connect to support